ಹತ್ತಿರವಾಗುತಿದೆ, ಇನ್ನೆಷ್ಟರ ದೂರವದು?
ಬೀಳುತ್ತಿದೆ, ಎಣಿಸಿದ್ದಕ್ಕಿಂತಲೂ ರಭಸವಾಗಿ.
ಕೇಳುತ್ತಿದೆ ಅದರ ನಿಲ್ಲದ ಭೋರ್ಗರೆತ,
ಕಿವಿ ಮುಚ್ಚಿದರೂ ಬಿಡದಂತೆ,
'ನೋಡೋ, ಬಚ್ಚಲ ಮೋರಿಯಲ್ಲವಿದು,
ಇಷ್ಟಿದೆ ಇದರ ಆಳ’ ಎಂದಂತೆ.
ಹುಟ್ಟದಿದ್ದೀತೇ ಭಯ? ಆ ಪ್ರಪಾತವ ನೋಡಿದಾಗ,
ಬಿದ್ದದ್ದೆಲ್ಲಾ ನೆಲಮುಟ್ಟದೆ ತೇಲಾಡುವಾಗ,
ಮುಟ್ಟಿದವಪ್ಪಳಿಸಿದ ರಭಸಕೆ ಸಿಡಿದು ಕರಗುವಾಗ.
ಭಯಕ್ಕಂಜಲಾದೀತೇ?
ಬೀಳಲೇಬೇಕೆನ್ನುವ ಆಸೆ ಮೂಡಿದಮೇಲೆಯೂ.
ಒಮ್ಮೆಯಾದರೂ ನೆಗೆಯಬೇಕಿದೆ,
ತಳ ಮುಟ್ಟುವವರೆಗೆ, ಮಬ್ಬು ಸರಿಯುವವರೆಗೆ.
ಇದೂ ಒಂದು ದಾರಿ, ಸಾಗರದೆಡೆಗೆ.
~*~
ಚಿತ್ರಕೃಪೆ: ಅಶೋಕ
7 comments:
I loved the last part..... Very nice and touching.
" ಒಮ್ಮೆಯಾದರೂ ನೆಗೆಯಬೇಕಿದೆ,
ತಳ ಮುಟ್ಟುವವರೆಗೆ, ಮಬ್ಬು ಸರಿಯುವವರೆಗೆ.
ಇದೂ ಒಂದು ದಾರಿ, ಸಾಗರದೆಡೆಗೆ "
ಈ ಸಾಲುಗಳು ಇಷ್ಟವಾದವು.
Anta... Kavite is very nice written :))...
Please continue :)
nice re nice:) prati baari odidagalu hosa artha dakkutte :)
ಚೆನ್ನಾಗಿದೆ.
ಇದು ನಿಮ್ಮ ಭಾವನೆಗಳೋ, ಅಥವಾ ನೀರಿಂದೋ?
ತುಂಬಾ ಸೊಗಸಾದ ಫೋಟೊ...
ಅದಕ್ಕಿಂತ ಸುಂದರವಾದ ಕವನ...!
ಎರಡಕ್ಕೂ ಹೃದಯ ಪೂರ್ವಕ ಅಭಿನಂದನೆಗಳು...
ಅಶೋಕ, ಭರತ್, ಕಾರ್ತೀಕ್, ಗೌತಮ್, ಪ್ರಕಾಶ್ ಸರ್, ಪುತ್ತೂರ್,
ಧನ್ಯವಾದಗಳು, ನಿಮ್ಮ ಪ್ರೋತ್ಸಾಹಕ್ಕೆ.
ಪುತ್ತೂರ್,
ನನ್ನದಂತೂ ಹೌದು. ನೀರನ್ನೂ ಒಂದು ಬಾರಿ ಕೇಳಿದರೆ ಉತ್ತಮ.. :)
Post a Comment