ಕೆಲವೊಂದು ಸಂದರ್ಭಗಳೇ ಹೀಗೆ,
ಆಗ ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ,
ಸುಮ್ಮನಿರುವುದು, ದೂರವಿರುವುದು.
ನಡೆಯಲು ತವಕಿಸುತ್ತಿರುವ ಪುಟ್ಟ ಮಗು ಬಿದ್ದಾಗ,
ನೋವಾದೀತು ಎಂದು ಎತ್ತಿಕೊಳ್ಳಬಾರದು,
ಸುಮ್ಮನಿರಬೇಕು, ದೂರವಿರಬೇಕು,
ಮತ್ತೆ ಎದ್ದು ನಡೆಯುತ್ತ ನಗುವುದನ್ನ ನೋಡಬೇಕಷ್ಟೇ.
ಇಂಪಾದ ದನಿಯಲ್ಲಿ ಹಕ್ಕಿ ಹಾಡುವಾಗ,
ಅದರ ಬಣ್ಣ ಯಾವುದೆಂದು ಹುಡುಕಬಾರದು,
ಸುಮ್ಮನಿರಬೇಕು, ದೂರವಿರಬೇಕು,
ಏನಿದ್ದರೂ ಅದರ ಹಾಡಿಗೆ ಮನಸೋಲಬೇಕಷ್ಟೇ.
ಆತ್ಮೀಯರ ಜೀವನ ಸುಖ-ಸಂತೋಷದಲ್ಲಿರುವಾಗ
ನಡುವೆ ಅನಾವಶ್ಯಕ ತಲೆ ಹಾಕಬಾರದು,
ಸುಮ್ಮನಿರಬೇಕು, ದೂರವಿರಬೇಕು,
ಎಂದಿಗೂ ಹೀಗೇ ಇರಲೆಂದು ಹಾರೈಸಬಹುದಷ್ಟೇ.
ಕೆಲವೊಂದು ಸಂದರ್ಭಗಳೇ ಹೀಗೆ,
ಆಗ ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ,
............
~*~