Tuesday, May 21, 2019

ಬೆಂಗಳೂರು-ಮಳೆ

ಮಳೆ ಬರದೆ ಬೆಳೆಯಿಲ್ಲದ ರೈತರು
ಕಂಗೆಟ್ಟು ಕೃಷಿಯ ಬಿಟ್ಟರು.
ದಿಕ್ಕೆಟ್ಟು ಕೆಲಸ ಅರಸಿ
ಬೆಂಗಳೂರಿಗೆ ಹೊರಟರು.

ಕೊನೆಗೂ ಕೊಂಚ ಕರಗಿದ ಮಳೆ
ಮನಸ್ಸನ್ನು ಬದಲಾಯಿಸಿತು.
ಖಾಲಿ ಖಾಲಿ ಹಳ್ಳಿಗಳ ಕಂಡು
ತಾನೂ ಬೆಂಗಳೂರಿಗೆ ಓಡಿತು.

ನೊಂದವರನು ಹುಡುಕುತ
ಊರ ತುಂಬಾ ಸುರಿಯಿತು.
ಅತ್ತು ಕರೆದು ಭೋರ್ಗರೆದರೂ
ಪ್ರಯೋಜನವೇನು ಆಗಲಿಲ್ಲ.
ಊರ ಬಿಟ್ಟು ಹೋದವರೆಂದೂ
ವಾಪಾಸು ಬರಲೇ ಇಲ್ಲ.

(ಪ್ರತಿ ಸರ್ತಿ‌ 'ಬೆಂಗಳೂರಲ್ಲಿ‌ ಸಿಕ್ಕಾಪಟ್ಟೆ ಮಳೆ ಆಗ್ತಿದೆ' ಅಂತ ಕೇಳಿದಾಗೆಲ್ಲಾ ಹಿಂಗೇನಾದ್ರು ಆಗಿರ್ಬಹುದೇನೋ ಅನ್ಸುತ್ತೆ)

No comments: