~*~
ಬಹಳಷ್ಟಿವೆ ಕನಸುಗಳು ನನ್ನ ಬಳಿ,
ಅದಕೆ ತಕ್ಕ ಪರಿಶ್ರಮವಿಲ್ಲವಷ್ಟೆ,
ಮೇಲ್ತೂರಿದರೂ ಹಾರಾಡದ
ದಾರ ಹರಿದ ಪಟಗಳಂತೆ.
~*~
ಜಾತ್ರೆಗೆ ಬಂದ ಪೋರ
ಕಂಡ ನೂರಚ್ಚರಿಗಳಲ್ಲಿ,
ಏನಮಾಡುವುದು ಬಿಡುವುದು ತಿಳಿಯದೆ,
ಏನನ್ನೂ ಮಾಡದೆ,
ನಿಂತಲ್ಲೇ ನಿಂತ, ಬೂದಿಯಾದ.
~*~
ಕೂಗಳತೆಯ ದೂರದಲ್ಲಿದ್ದಾಗ ಕಡಲು,
ಯೋಚಿಸಿತು ಒಮ್ಮೆ ನದಿಯು,
ಆ ಪಕ್ಕದ ನದಿಯಂತೆ
ಇರಬಹುದಾಗಿತ್ತಲ್ಲಾ ನಾನು?
ಹೌದು ಹೌದು ಎಂದು ನಕ್ಕಿತು ಉಪ್ಪು ನೀರು.
~*~
ಜಗತ್ತೇ ವಕ್ರ, ಗೋಜಲು, ಅಸಂಬದ್ಧ,
ಎಂದೆಲ್ಲಾ ಒದರುತಿದ್ದ ನಾನು,
ಸುಮ್ಮನಾದೆ ಒಂದು ದಿನ, ಯಾರಿಗೂ ಹೇಳದೆ.
ಅಂದಹಾಗೆ ನಿಮಗೆ ಹೇಳುವುದೇ ಮರೆತೆ,
ಈಗ ನನ್ನ ಬಳಿಯೂ ಚಾಳೀಸು ಅಂತ ಒಂದಿದೆ.
~*~
ಬಹಳಷ್ಟಿವೆ ಕನಸುಗಳು ನನ್ನ ಬಳಿ,
ಅದಕೆ ತಕ್ಕ ಪರಿಶ್ರಮವಿಲ್ಲವಷ್ಟೆ,
ಮೇಲ್ತೂರಿದರೂ ಹಾರಾಡದ
ದಾರ ಹರಿದ ಪಟಗಳಂತೆ.
~*~
ಜಾತ್ರೆಗೆ ಬಂದ ಪೋರ
ಕಂಡ ನೂರಚ್ಚರಿಗಳಲ್ಲಿ,
ಏನಮಾಡುವುದು ಬಿಡುವುದು ತಿಳಿಯದೆ,
ಏನನ್ನೂ ಮಾಡದೆ,
ನಿಂತಲ್ಲೇ ನಿಂತ, ಬೂದಿಯಾದ.
~*~
ಕೂಗಳತೆಯ ದೂರದಲ್ಲಿದ್ದಾಗ ಕಡಲು,
ಯೋಚಿಸಿತು ಒಮ್ಮೆ ನದಿಯು,
ಆ ಪಕ್ಕದ ನದಿಯಂತೆ
ಇರಬಹುದಾಗಿತ್ತಲ್ಲಾ ನಾನು?
ಹೌದು ಹೌದು ಎಂದು ನಕ್ಕಿತು ಉಪ್ಪು ನೀರು.
~*~
ಜಗತ್ತೇ ವಕ್ರ, ಗೋಜಲು, ಅಸಂಬದ್ಧ,
ಎಂದೆಲ್ಲಾ ಒದರುತಿದ್ದ ನಾನು,
ಸುಮ್ಮನಾದೆ ಒಂದು ದಿನ, ಯಾರಿಗೂ ಹೇಳದೆ.
ಅಂದಹಾಗೆ ನಿಮಗೆ ಹೇಳುವುದೇ ಮರೆತೆ,
ಈಗ ನನ್ನ ಬಳಿಯೂ ಚಾಳೀಸು ಅಂತ ಒಂದಿದೆ.
~*~
7 comments:
i liked the first one. excellent and precise.... somewhere in this messy fast world we are exactly the way u told...
ಒಂದಷ್ಟು ಇವು.. ;) ನೈಸ್!
Btw, ನಿನ್ ಬ್ಲಾಗು ಒಂಥರಾ ಭೂತಬಂಗ್ಲೆ ಥರ ಕಾಣ್ತಿದೆ. ಕಗ್ರಾಟ್ಸ್! ;)
ಅಶೋಕ,
ಧನ್ಯವಾದ.. :)
ಸುಶ್ರುತ,
ಧನ್ಯವಾದ.. :) ಅಯ್ಯೋ ಹಾಗೆಲ್ಲಾ ಹೆದರಿಸ್ಬೇಡ, ಆಮೆಲೆ ಹೆದರಿಕೊಂಡು ಜನ ಬರೋದೇ ಇಲ್ಲ.. ;)
ni hedrada shusrutanna hange helidda heli.nange bhoota kandre bhaya ille.haaganta nin blog bhoota bangle helella:) nice writing:)
very nice!
keep writing.
ಅನಂತ್...ಚನ್ನಾಗಿವೆ ಸಾಲುಗಳು...ಸಮುದ್ರದ ಉಪ್ಪು ನಗಲೂ ಕಾರ್ಣವಿದೆಯಲ್ಲಾ ...ಇದನ್ನು ಮನದಟ್ಟು ಮಾಡಿಕೊಳ್ಳಲಾಗದ ನದಿ...
ನಿಮ್ಮ ಈ ಕಡೆಯ ಸಾಲುಗಳು ಇಷ್ಟವಾದವು...
ಜಗತ್ತೇ ವಕ್ರ, ಗೋಜಲು, ಅಸಂಬದ್ಧ,
ಎಂದೆಲ್ಲಾ ಒದರುತಿದ್ದ ನಾನು,
.....
Post a Comment