Thursday, March 21, 2013

ಇನ್ನೊಂದು ಬ್ಲಾಗು....

ಸುಮಾರು 3-4 ವರ್ಷಗಳ ಹಿಂದೆ ನಾನು ಇದಲ್ದೇ ಇನ್ನೊಂದು ಬ್ಲಾಗ್ ಶುರು ಮಾಡಿದ್ದೆ, ಯಾವ್ದೋ ಬೇರೆ ಐಡಿಯಲ್ಲಿ. ಆವಾಗ ಅನಾಮಿಕ್ನಾಗಿ ಬರಿಬೇಕು ಅಂತ ಏನೋ ಒಂದು ಹುಚ್ಚು. ಸ್ವಲ್ಪ ದಿವಸ ಆದ್ಮೇಲೆ ಆ ಬ್ಲಾಗ್ ಬಗ್ಗೆ ನೆನಪೇ ಇಲ್ಲ, ಮರೆತು ಬಿಟ್ಟಿದ್ದೆ. ಇತ್ತೀಚೆಗೆ ಯಾಕೋ ನೆನಪಾಗಿ ಹುಡುಕಿದಾಗ ಅಂತೂ ಬ್ಲಾಗ್ ಸಿಕ್ತು, ಆದ್ರೆ ಪಾಸ್‍ವರ್ಡ್ ಮಾತ್ರ ಜಪ್ಪಯ್ಯ ಅಂದ್ರೂ ನೆನಪಾಗ್ತಿಲ್ಲ. ಅದರಲ್ಲಿ ಇದ್ದಿದ್ದ್ಂಗೆನೇ ಈ ಹೊಸ ಬ್ಲಾಗಲ್ಲಿ ಹಾಕಿದೀನಿ. ಸಾಧ್ಯ ಆದ್ರೆ ಇನ್ನೊಂದಿಷ್ಟು ಬರ್ದು ಮುಂದುವರೆಸ್ತಿನಿ.

http://mevsi13.blogspot.in



 ಓದೋದು ಮಾತ್ರ ನಿಮ್ಮ ಕರ್ಮ. ;o)

Tuesday, January 8, 2013

ಸುಮ್ಮನಿರಬೇಕು, ದೂರವಿರಬೇಕು...

ಕೆಲವೊಂದು ಸಂದರ್ಭಗಳೇ ಹೀಗೆ,
ಆಗ ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ,
ಸುಮ್ಮನಿರುವುದು, ದೂರವಿರುವುದು.

ನಡೆಯಲು ತವಕಿಸುತ್ತಿರುವ ಪುಟ್ಟ ಮಗು ಬಿದ್ದಾಗ,
ನೋವಾದೀತು ಎಂದು ಎತ್ತಿಕೊಳ್ಳಬಾರದು,
ಸುಮ್ಮನಿರಬೇಕು, ದೂರವಿರಬೇಕು,
ಮತ್ತೆ ಎದ್ದು ನಡೆಯುತ್ತ ನಗುವುದನ್ನ ನೋಡಬೇಕಷ್ಟೇ.

ಇಂಪಾದ ದನಿಯಲ್ಲಿ ಹಕ್ಕಿ ಹಾಡುವಾಗ,
ಅದರ ಬಣ್ಣ ಯಾವುದೆಂದು ಹುಡುಕಬಾರದು,
ಸುಮ್ಮನಿರಬೇಕು, ದೂರವಿರಬೇಕು,
ಏನಿದ್ದರೂ ಅದರ ಹಾಡಿಗೆ ಮನಸೋಲಬೇಕಷ್ಟೇ.

ಆತ್ಮೀಯರ ಜೀವನ ಸುಖ-ಸಂತೋಷದಲ್ಲಿರುವಾಗ
ನಡುವೆ ಅನಾವಶ್ಯಕ ತಲೆ ಹಾಕಬಾರದು,
ಸುಮ್ಮನಿರಬೇಕು, ದೂರವಿರಬೇಕು,
ಎಂದಿಗೂ ಹೀಗೇ ಇರಲೆಂದು ಹಾರೈಸಬಹುದಷ್ಟೇ.

ಕೆಲವೊಂದು ಸಂದರ್ಭಗಳೇ ಹೀಗೆ,
ಆಗ ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ,
............


~*~